ದಾಸನಾಗು, ವಿಶೇಷನಾಗು.

ಖ್ಯಾತಿ ಅಂದರೆ ಅವನದ್ದು ಕಣ್ರಿ.
ನಿಮಗ್ಯಾಕೆ ರಿ ಪರವಸ್ತು?
ದಾಸನಾಗು, ವಿಶೇಷನಾಗು.
ಪ್ರೇಮದಲ್ಲಿ ಸುಖಿಸು.

ಖ್ಯಾತಿ ಅಂದರೆ ಹೊರಗೆ ತಿರುಗುವ ನೆರಳು. ಅದು ಯಾರದ್ದೋ, ಯಾರ ಕೈಯಲ್ಲೋ ಇರುತ್ತದೆ. ಇಂದು ಹೊಗಳಿಕೆ, ನಾಳೆ ಮೌನ. ಅದನ್ನು ಹಿಡಿಯಲು ಓಡುವವನು ತನ್ನೊಳಗಿನ ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. “ನಿಮಗ್ಯಾಕೆ ರಿ ಪರವಸ್ತು?” ಎಂಬ ಪ್ರಶ್ನೆ ಇಲ್ಲಿ ತೀಕ್ಷ್ಣ. ಪರದ್ರವ್ಯ, ಪರಕೀರ್ತಿ, ಪರಮತ ಎಲ್ಲವೂ ಮನಸ್ಸನ್ನು ಚೂರುಮೂರು ಮಾಡುವ ವಸ್ತುಗಳು. ಸ್ವಂತ ನೆಲವಿಲ್ಲದೆ ಮರ ಬೆಳೆದು ನಿಲ್ಲುವುದಿಲ್ಲ.

ದಾಸನಾಗು ಎನ್ನುವುದು ಹೀನತೆ ಅಲ್ಲ; ಅದು ಅಹಂಕಾರದ ಭಾರ ಇಳಿಸುವ ಮಾರ್ಗ. ದಾಸತ್ವದಲ್ಲಿ ಸ್ವಾತಂತ್ರ್ಯ ಇದೆ. ಏಕೆಂದರೆ ಅಲ್ಲಿ ಹೊರೆ ಇಲ್ಲ, ಹೋಲಿಕೆ ಇಲ್ಲ. ವಿಶೇಷನಾಗು ಎನ್ನುವುದು ಬೇರೆವರಿಗಿಂತ ಮೇಲು ಎನ್ನುವುದಲ್ಲ; ತನ್ನ ಕರ್ತವ್ಯವನ್ನು ಪೂರ್ಣವಾಗಿ ಬದುಕುವುದು. ಕರ್ತವ್ಯ ನಿಷ್ಠೆಯಿಂದ ನೆರವೇರಿಸಿದಾಗ ಜೀವನವೇ ವಿಶೇಷವಾಗುತ್ತದೆ.

ಪ್ರೇಮದಲ್ಲಿ ಸುಖಿಸು ಎಂಬುದು ಅಂತಿಮ ಉಪದೇಶ. ಪ್ರೇಮ ಇಲ್ಲಿ ಭಾವೋದ್ರೇಕವಲ್ಲ, ಅದು ಬದುಕಿನ ಸರಿಯಾದ ದೃಷ್ಠಿ. ಪ್ರೇಮವಿರುವಲ್ಲಿ ಲೆಕ್ಕಾಚಾರ ಇಲ್ಲ, ಅಲ್ಲಿ ಶಾಂತಿ ಇದೆ. ಖ್ಯಾತಿ ಹೊರಗೆ ಹೊಳೆಯುತ್ತದೆ; ಪ್ರೇಮ ಒಳಗೆ ಬೆಳಗುತ್ತದೆ. ಅದೇ ಶಾಶ್ವತ.

Comments

Popular posts from this blog

How to develop Drshta or seer vision and remain unaffected?

Maniratnam, Raavanan and Ramayana

Vishnu Sahasranama verse 60, Bhagavaan Bhagaha Nandi (Gaudiya interpretation)