Posts

Showing posts with the label kannada

ವಿಷಯ-ವಿಷ-ಸರ್ಪ

  ವಿಷಯ-ವಿಷ-ಸರ್ಪ ಸತ್ತ್ವ ರಜಸ್ತಮ ಮೂರು ಗುಣಗಳ ಲೋಕದ ಲಕ್ಷಣ ಭಯ, ಅಸ್ಥಿರತೆ; ಅದರೊಳು ಸುಖವನು ಹುಡುಕುತ ಹೋದರೆ ಹುಚ್ಚು ಹುಡುಕಾಟ, ಕೊನೆಗೆ ವಿಫಲತೆ. ಕೈಗೆ ಸಿಕ್ಕಿದರೂ ಹತ್ತಿರ ಬಂದರೂ ತೊಡಗದಿರು ಮನವೇ, ಅದು ಕಚ್ಚುವುದು; ವಿಷಯವೆಂಬುದೇ ವಿಷದ ಸರ್ಪವು, ಇಂದ್ರಿಯ ಕಡಿತ ಜೀವ ಸುಡುವುದು. ಸೇವೆಯ ಭಾವದಿ ಬಂದರೆ ವಿಷಯ ಅನುಕೂಲವಾಗಿ ಒಲಿದು ನಿಲ್ಲುವುದು; ಭೋಗದ ಬುದ್ಧಿಯಲಿ ಹಿಡಿದರೆ ಅದನು ಹಾವಿನ ಹೆಡೆಯಾಗಿ ಹೊಡೆಯುವುದು. ಭೋಗವೇ ಮೂಲ ರೋಗಕೆಲ್ಲಾ, ಕಡಿತದ ಜ್ವರ, ತಾಪ, ಬಾಧೆ; ಭೋಗದಿ ಮುಳುಗಿದ ದೇಹ ಕೊನೆಗೆ ವಿಷಮಯವಾಗಿ ತೀರುವ ವ್ಯಥೆ. ಬ್ರಹ್ಮನಿಧಯೇ ವಸಿಷ್ಠಾಯ